Ration Cards: 2025 ರ ಪಡಿತರ ಚೀಟಿ ಗೈಡ್: ಯಾವ ಕಾರ್ಡ್ ನಿಮಗೆ ಸೂಕ್ತ?

ಭಾರತದಲ್ಲಿ ಪಡಿತರ ಚೀಟಿ (Ration Card)ವು ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆ ಆಗಿದ್ದು, ಇದು ಅರ್ಹ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಕಾರ್ಡ್ ನಿಂದ ಕುಟುಂಬಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA), 2013 ಅಡಿಯಲ್ಲಿ ನಿಗದಿತ ಪ್ರಮಾಣದ ಆಹಾರವನ್ನು ಪಡೆಯಲು ಅರ್ಹರಾಗುತ್ತಾರೆ.

ಪಡಿತರ ಚೀಟಿ ಎಂದರೇನು?

ಪಡಿತರ ಚೀಟಿ ರಾಜ್ಯ ಸರ್ಕಾರದ ವತಿಯಿಂದ ನೀಡಲ್ಪಡುವ ಗುರುತಿನ ಪುರಾವೆ. ಇದನ್ನು ಹೊಂದಿರುವವರು ನ್ಯಾಯಬೆಲೆ ಅಂಗಡಿಗಳಿಂದ ಕಡಿಮೆ ದರದಲ್ಲಿ ಧಾನ್ಯಗಳನ್ನು ಪಡೆಯಬಹುದು. ಪಡಿತರ ಚೀಟಿ ಎಲ್ಲೆಡೆ ಗುರುತಿನ ಪ್ರಮಾಣಪತ್ರವಾಗಿಯೂ ಬಳಸಬಹುದು.

ಭಾರತದಲ್ಲಿ ಪಡಿತರ ಚೀಟಿಗಳ 5 ಪ್ರಮುಖ ಮಾದರಿಗಳು

ಆದ್ಯತಾ ಕುಟುಂಬ ಪಡಿತರ ಚೀಟಿ (PHH)ಅರ್ಹ ಕುಟುಂಬಗಳಿಗೆ ನೀಡಲಾಗುತ್ತದೆ.ಪ್ರತಿ ಸದಸ್ಯನಿಗೆ ತಿಂಗಳಿಗೆ 5 ಕೆಜಿ ಧಾನ್ಯ.ಅಕ್ಕಿ – ₹3/ಕೆಜಿ, ಗೋಧಿ – ₹2/ಕೆಜಿ, ಜೋಳ – ₹1/ಕೆಜಿ.

ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ (AAY)ಅತಿದುರ್ಬಲ ಕುಟುಂಬಗಳಿಗೆ.ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆಜಿ ಆಹಾರ ಧಾನ್ಯ.ಗೋಧಿ – ₹2/ಕೆಜಿ, ಅಕ್ಕಿ – ₹3/ಕೆಜಿ.

ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ (BPL)ಸರ್ಕಾರ ಗುರುತಿಸಿದ ಬಡ ಕುಟುಂಬಗಳಿಗೆ.ತಿಂಗಳಿಗೆ 10-20 ಕೆಜಿ ಧಾನ್ಯ ಸಬ್ಸಿಡಿ ದರದಲ್ಲಿ

ಬಡತನ ರೇಖೆಗಿಂತ ಮೇಲಿರುವ ಪಡಿತರ ಚೀಟಿ (APL)ಸಾಮಾನ್ಯ ಅಥವಾ ಮಧ್ಯಮವರ್ಗದ ಕುಟುಂಬಗಳಿಗೆ.100% ಧರದಲ್ಲಿ ತಿಂಗಳಿಗೆ 10-20 ಕೆಜಿ ಧಾನ್ಯ

ಅನ್ನಪೂರ್ಣ ಯೋಜನೆ ಪಡಿತರ ಚೀಟಿ (AY)65 ವರ್ಷಕ್ಕಿಂತ ಮೇಲ್ಪಟ್ಟ ಬಡ ವೃದ್ಧರಿಗೆ.ತಿಂಗಳಿಗೆ 10 ಕೆಜಿ ಧಾನ್ಯ ಉಚಿತ/ಕಡಿಮೆ ದರದಲ್ಲಿ.

ಎನ್‌ಎಫ್‌ಎಸ್‌ಎ ಅಡಿಯಲ್ಲಿ ನೀಡಲಾಗುವ ಪಡಿತರ ಚೀಟಿಗಳು

ಅಂತ್ಯೋದಯ ಪಡಿತರ ಚೀಟಿ (AAY)ನಿರುದ್ಯೋಗಿಗಳು, ಮಹಿಳೆಯರು, ದಿನಗೂಲಿ ಕಾರ್ಮಿಕರು.ತಿಂಗಳಿಗೆ 15 ಕೆಜಿ ಗೋಧಿ + 20 ಕೆಜಿ ಅಕ್ಕಿ.

ಆದ್ಯತಾ ಕುಟುಂಬ ಪಡಿತರ ಚೀಟಿ (PHH)ಪ್ರತಿ ಸದಸ್ಯನಿಗೆ ತಿಂಗಳಿಗೆ 5 ಕೆಜಿ ಧಾನ್ಯ.ರಾಜ್ಯ ಸರ್ಕಾರದ ಟಿಪಿಡಿಎಸ್ ಮಾರ್ಗಸೂಚಿಗಳ ಪ್ರಕಾರ.

ಆದ್ಯತೆಯೇತರ ಪಡಿತರ ಚೀಟಿ (NPHH)ಸಬ್ಸಿಡಿ ಸೌಲಭ್ಯ ಇಲ್ಲ; ಗುರುತಿನ ಉದ್ದೇಶಕ್ಕೆ ಮಾತ್ರ.

ಟಿಪಿಡಿಎಸ್ ಅಡಿಯಲ್ಲಿ ಹಳೆಯ ಮಾದರಿಯ ಪಡಿತರ ಚೀಟಿಗಳು

ಕೆಲವು ರಾಜ್ಯಗಳು ಇನ್ನೂ ಟಿಪಿಡಿಎಸ್ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ (NFSA ಜಾರಿಗೆ ತಂದಿಲ್ಲ).

ಈ ರಾಜ್ಯಗಳಲ್ಲಿ BPL, APL ಮತ್ತು AY ಮಾದರಿಗಳ ಪಡಿತರ ಚೀಟಿಗಳು ಮುಂದುವರಿದಿವೆ.

ಪಡಿತರ ಚೀಟಿಗಳ ಬಣ್ಣ

ಪಡಿತರ ಚೀಟಿಯ ಬಣ್ಣಗಳು: ಬಿಳಿ, ಹಳದಿ/ಕೇಸರಿ, ಹಸಿರು.

ಬಿಪಿಎಲ್, ಎಪಿಎಲ್, ಎವೈ ಚೀಟಿಗಳಿಗೆ ಬಣ್ಣದ ಪ್ರತ್ಯೇಕತೆ ರಾಜ್ಯದ ಆಧಾರದ ಮೇಲೆ ಬದಲಾಗುತ್ತದೆ.

ಕೆಲ ರಾಜ್ಯಗಳು ಇತ್ತೀಚೆಗೆ ಬಣ್ಣದ ಚೀಟಿಗಳನ್ನು ನೀಡುವ ಪದ್ಧತಿಯನ್ನು ನಿಲ್ಲಿಸಿವೆ.

ಪಡಿತರ ಚೀಟಿಯ ಉಪಯೋಗಗಳು

ನ್ಯಾಯಬೆಲೆ ಅಂಗಡಿಗಳಿಂದ ಆಹಾರ ಧಾನ್ಯ ಸಬ್ಸಿಡಿ ದರದಲ್ಲಿ.

ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಬ್ಯಾಂಕ್ ಖಾತೆ, ಮತದಾರರ ಗುರುತಿನ ಚೀಟಿ ಅರ್ಜಿಗೆ ಗುರುತಿನ ಪುರಾವೆ.

ಡ್ರೈವಿಂಗ್ ಲೈಸೆನ್ಸ್, ಸಿಮ್ ಕಾರ್ಡ್, ಎಲ್‌ಪಿಜಿ ಸಂಪರ್ಕ.

ಸರಕಾರದಿಂದ ಘೋಷಿತ ಹಲವಾರು ಯೋಜನೆಗಳಿಗೆ ಅರ್ಹತೆ.

sreelakshmisai
Author

sreelakshmisai

Leave a Reply

Your email address will not be published. Required fields are marked *