ರಾಜ್ಯದಲ್ಲಿ ಅನರ್ಹರಿಗೆ ರೇಷನ್ ಕಾರ್ಡ್ ನೀಡಲಾಗಿದೆ ಎಂಬ ಆರೋಪಗಳು ಹಿಂದೆಂದಿನಿಂದಲೇ ಕೇಳಿಬರುತ್ತಿದ್ದವು. ಇದೀಗ ಸರ್ಕಾರ ಹೊಸ ಕ್ರಮ ಕೈಗೊಂಡಿದ್ದು, ಅರ್ಹರಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಯೋಜನೆಗಳನ್ನು ಕಠಿಣವಾಗಿ ಅನುಷ್ಟಾನಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮವಾರು ಪಡಿತರ ಚೀಟಿ ಪಟ್ಟಿ ಪ್ರಕಟಿಸಲಾಗಿದೆ.
ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ? ಪರಿಶೀಲಿಸುವ ವಿಧಾನ
ನಿಮ್ಮ ಹೆಸರು ಇದೆಯೆ ಎಂಬುದನ್ನು ನೋಡಲು ಗ್ರಾಮ ಪಂಚಾಯತ್ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗುವ ಅಗತ್ಯವಿಲ್ಲ. ಇದನ್ನು ನೀವು Ahara Karnataka ಅಧಿಕೃತ ವೆಬ್ಸೈಟ್ ಮೂಲಕವೇ ಪರಿಶೀಲಿಸಬಹುದು.
ಪಡಿತರ ಚೀಟಿ ಡೌನ್ಲೋಡ್ ಮಾಡುವ ಹಂತಗಳು
Ahara Karnataka ಪೋರ್ಟಲ್ ಗೆ ಭೇಟಿ ನೀಡಿ
E-Services > E-Ration Card > Download Ration Card ಆಯ್ಕೆಮಾಡಿ
ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ
ಆಧಾರ್ ಜೋಡನೆ ಮಾಡಿದ ಮೊಬೈಲ್ಗೆ OTP ಬರುತ್ತದೆ
OTP ನಮೂದಿಸಿದ ನಂತರ ಪಿಡಿಎಫ್ನಲ್ಲಿ ಡೌನ್ಲೋಡ್ ಮಾಡಿ
DBT ಸ್ಥಿತಿ ಪರಿಶೀಲಿಸುವ ವಿಧಾನ
ವೆಬ್ಸೈಟ್ನಲ್ಲಿ E-Status > DBT Status ಆಯ್ಕೆ ಮಾಡಿ
ಜಿಲ್ಲೆಯನ್ನು ಆಯ್ಕೆ ಮಾಡಿ
ಪಡಿತರ ಚೀಟಿ ಸಂಖ್ಯೆ ನಮೂದಿಸಿ
DBT ಮೂಲಕ ಬರುವ ಯೋಜನಾ ಹಣದ ಸ್ಥಿತಿಯನ್ನು ಇಲ್ಲಿ ನೋಡಬಹುದು
ತಿದ್ದುಪಡಿ ಅರ್ಜಿ ಸ್ಥಿತಿ ಪರಿಶೀಲನೆ
ವೆಬ್ಸೈಟ್ಗೆ ಹೋಗಿ
New/Existing RC Request Status ಕ್ಲಿಕ್ ಮಾಡಿ
ಜಿಲ್ಲೆ ಆಯ್ಕೆಮಾಡಿ
OTP ಅಥವಾ No-OTP ಆಯ್ಕೆಮಾಡಿ
RC ಸಂಖ್ಯೆ ನಮೂದಿಸಿ ತಿದ್ದುಪಡಿ ಸ್ಥಿತಿಯನ್ನು ಪರಿಶೀಲಿಸಿ
ಪಡಿತರ ಚೀಟಿ ಖಾಲಿ ರೇಷನ್ ಪಡೆಯಲು ಮಾತ್ರವಲ್ಲ, ವಿವಿಧ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಹಾಕಲು ಸಹ ಮುಖ್ಯ ದಾಖಲೆ. ಬಹುತೇಕ ಬಿಪಿಎಲ್ ಕಾರ್ಡ್ದಾರರು ಆಸ್ಪತ್ರೆ ಚಿಕಿತ್ಸೆಯಲ್ಲಿ ವಿನಾಯಿತಿ, ವಿದ್ಯಾರ್ಥಿವೇತನ, ಇತ್ಯಾದಿ ಸೌಲಭ್ಯಗಳಿಗಾಗಿ ಇದನ್ನು ಬಳಸುತ್ತಾರೆ.
ನೀವು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿದ್ದರೆ, ಈ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆಯಾಗಿದೆ ಎಂಬುದನ್ನು ತಕ್ಷಣ ಪರಿಶೀಲಿಸಿ. ತಪ್ಪಾದರೆ, ತಿದ್ದುಪಡಿ ಅರ್ಜಿ ಸಲ್ಲಿಸಲು ವಿಳಂಬ ಮಾಡಬೇಡಿ.