ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತಮ್ಮದೇ ಆದ ಮನೆ ಹೊಂದುವ ಕನಸನ್ನು ನನಸುಮಾಡಿಕೊಳ್ಳಲು ಒದಗಿರುವ ವಿಶಿಷ್ಟ ಅವಕಾಶವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ದೇಶದ ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಸೌಲಭ್ಯಯುಕ್ತ ಗೃಹ ನೀಡುವ ಉದ್ದೇಶದ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯನ್ನು 2015ರ ಜೂನ್ 25ರಂದು ಪ್ರಾರಂಭಿಸಲಾಯಿತು ಮತ್ತು ಇದುವರೆಗೆ ಲಕ್ಷಾಂತರ ಜನರಿಗೆ ಮನೆಗಳ ಒದಗಿಸುವಲ್ಲಿ ನೆರವಾಯಿತು. ಈಗ, PMAY 2.0 ಅಡಿಯಲ್ಲಿ ಕೇಂದ್ರ ಸರ್ಕಾರ 3 ಕೋಟಿ ಹೊಸ ಮನೆಗಳ ನಿರ್ಮಾಣ ಗುರಿಯೊಂದಿಗೆ ಮುಂದಾಗಿದೆ, ಇದಕ್ಕಾಗಿ 10 ಲಕ್ಷ ಕೋಟಿ ರೂಪಾಯಿಯ ಹಣಕಾಸನ್ನು ಮೀಸಲಿಟ್ಟಿದೆ.
ಹೊಸ ಯೋಜನೆಗೆ ಅರ್ಹತೆಯಲ್ಲಿ ಬದಲಾವಣೆಗಳು:
PMAY 2.0ನಲ್ಲಿ ಅರ್ಹತಾ ನಿಯಮಗಳಲ್ಲಿ ಸಾಕಷ್ಟು ಸಡಿಲಿಕೆಗಳು ಮಾಡಲಾಗಿದೆ:
ಈಗ ಮೊದಲು ಮಾಸಿಕ ಆದಾಯ 10,000 ರೂ.ವರೆಗಿನವರಷ್ಟೇ ಅರ್ಹರಾಗಿದ್ದರು, ಇದನ್ನು ಈಗ 15,000 ರೂ.ಗೆ ಹೆಚ್ಚಿಸಲಾಗಿದೆ.
ಮಧ್ಯಮ ವರ್ಗದ ಕುಟುಂಬಗಳು ಕೂಡ ಈ ಯೋಜನೆಯ ಲಾಭ ಪಡೆಯಲು ಅವಕಾಶವಿದೆ.
ಮಣ್ಣಿನ ಮನೆ, ಫ್ರಿಜ್ ಅಥವಾ ದ್ವಿಚಕ್ರ ವಾಹನ ಇದ್ದರೆ ಅರ್ಹರಾಗಲಾರರು ಎಂಬ ನಿಯಮಗಳನ್ನು ಈಗ ಸಡಿಲಿಸಲಾಗಿದೆ.
ಅರ್ಹ ವ್ಯಕ್ತಿಗಳ ಆಯ್ಕೆ ಪ್ರಕ್ರಿಯೆ ಗ್ರಾಮ ಮಟ್ಟದಲ್ಲಿ ಸಾರ್ವಜನಿಕ ಸಭೆಗಳ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತದೆ.
90 ದಿನಗಳಲ್ಲಿ ಮನೆ ಸಿಗುವುದು:
ಸರ್ಕಾರ ಘೋಷಿಸಿದಂತೆ, ಅರ್ಹ ಫಲಾನುಭವಿಗಳಿಗೆ ಕೇವಲ 90 ದಿನಗಳಲ್ಲಿ ಮನೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೇ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
pmaymis.gov.in ವೆಬ್ಸೈಟ್ಗೆ ಭೇಟಿ ನೀಡಿ.
ನಾಗರಿಕ ಮೌಲ್ಯಮಾಪನ’ ವಿಭಾಗದಲ್ಲಿ ‘ಇತರ 3 ಘಟಕಗಳ ಅಡಿಯಲ್ಲಿ ಪ್ರಯೋಜನಗಳು’ ಆಯ್ಕೆಮಾಡಿ.
ಆಧಾರ್ ಸಂಖ್ಯೆ ಮತ್ತು ಹೆಸರು ನಮೂದಿಸಿ ಪರಿಶೀಲಿಸಿ.
ನಂತರ ಬರುವ ಅರ್ಜಿ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ತುಂಬಿ, ಕ್ಯಾಪ್ಚಾ ನಮೂದಿಸಿ ಮತ್ತು ‘ಉಳಿಸು’ ಕ್ಲಿಕ್ ಮಾಡಿ.
ಅರ್ಜಿ ಪ್ರಿಂಟ್ಔಟ್ ತೆಗೆದು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಬ್ಯಾಂಕಿಗೆ ಸಲ್ಲಿಸಿ.
ವೆಬ್ಸೈಟ್ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಪುರುಷರಷ್ಟೇ ಇರುವ ಕುಟುಂಬಗಳು ಸಹ ಅರ್ಜಿ ಸಲ್ಲಿಸಬಹುದು.
ಕನಿಷ್ಠ 70 ವರ್ಷ ವಯಸ್ಸಿನವರು ಅರ್ಹರು.
ಈಗಾಗಲೇ ತಮ್ಮ ಹೆಸರಿನಲ್ಲಿ ಮನೆ ಇಲ್ಲದವರಾಗಿರಬೇಕು.
ಇತರ ಸರ್ಕಾರದ ಗೃಹ ಯೋಜನೆಯ ಲಾಭ ಪಡೆದಿರಬಾರದು.
ಮಹಿಳೆಯ ಹೆಸರಿನಲ್ಲಿ ಮನೆಯ ಮಾಲೀಕತ್ವ ಇರುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ.
ಯೋಜನೆಯ ಲಾಭ ಪಡೆಯುವವರಿಗೆ ವಿಭಾಗಗಳು:
ಆರ್ಥಿಕವಾಗಿ ದುರ್ಬಲ ವರ್ಗ (EWS)ಕಡಿಮೆ ಆದಾಯದ ಗುಂಪು (LIG)ಮಧ್ಯಮ ಆದಾಯ ಗುಂಪು – 1 (MIG-I)ಮಧ್ಯಮ ಆದಾಯ ಗುಂಪು – 2 (MIG-II)