PM Kisan 20th installment, ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಬಹಳ ಮುಖ್ಯವಾಗಿದೆ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ (DBT) ಯೋಜನೆಯಾಗಿದೆ.
ಈ ಯೋಜನೆಯಡಿಯಲ್ಲಿ, ವರ್ಷಕ್ಕೆ 6000 ರೂ.ಗಳ ಆರ್ಥಿಕ ಸಹಾಯವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಾಕಲಾಗುತ್ತದೆ. ರೈತರು ಈ ಹಣವನ್ನು ಗೊಬ್ಬರ, ಬೀಜಗಳು ಮತ್ತು ರಸಗೊಬ್ಬರಗಳಂತಹ ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಲು ಬಳಸಿಕೊಳ್ಳಬಹುದು
PM ಕಿಸಾನ್ 20ನೇ ಕಂತು ಯಾವಾಗ ಬರುತ್ತದೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ವರ್ಷದಲ್ಲಿ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಕಳುಹಿಸಲಾಗುತ್ತದೆ. ಪ್ರತಿ ಕಂತಿನಲ್ಲಿ 2000 ರೂ.ಗಳನ್ನು ಡಿಬಿಟಿ ಮೂಲಕ ಕಳುಹಿಸಲಾಗುತ್ತದೆ. ಇಲ್ಲಿಯವರೆಗೆ, ಪಿಎಂ ಕಿಸಾನ್ ಅಡಿಯಲ್ಲಿ 19 ಕಂತುಗಳನ್ನು ನೇರವಾಗಿ ರೈತರ ಖಾತೆಗಳಿಗೆ ಕಳುಹಿಸಲಾಗಿದೆ. ಪ್ರಸ್ತುತ, ರೈತರು 20ನೇ ಕಂತಿಗಾಗಿ ಕಾಯಬೇಕಿದೆ. ಪಿಎಂ ಕಿಸಾನ್ 20ನೇ ಕಂತಿನ ಹಣ ಜೂನ್‌ನಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ 20ನೇ ಕಂತು ಪಡೆಯಲು ರೈತರು ಒಂದು ಕೆಲಸ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಏಪ್ರಿಲ್ 30ರೊಳಗೆ ಈ ಕೆಲಸ ಮಾಡಿಕೊಳ್ಳಿ:
ಇತ್ತೀಚೆಗೆ ಕೃಷಿ ಇಲಾಖೆಯು ಕಿಸಾನ್ ಗುರುತಿನ ಚೀಟಿ ಮಾಡಿಸಲು ನೋಟಿಸ್ ಜಾರಿ ಮಾಡಿತ್ತು. ಈ ಸೂಚನೆಯಲ್ಲಿ ಮಾಹಿತಿ ನೀಡುತ್ತಾ, ಏಪ್ರಿಲ್ 30ರ ಮೊದಲು ನೀವು ಕೃಷಿ ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ನೀವು ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿಗಾಗಿ ಮತ್ತು ಕಿಸಾನ್ ಗುರುತಿನ ಚೀಟಿ ಪಡೆಯಲು ಬಯಸಿದರೆ, ನೀವು ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರ ಅಥವಾ ಕಂದಾಯ ಇಲಾಖೆಗೆ ಹೋಗಬಹುದು. ರೈತರು ತಮ್ಮ ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳದಿದ್ದರೆ, ಕಂತು ಪಡೆಯುವಲ್ಲಿ ಅವರಿಗೆ ಸಮಸ್ಯೆಗಳು ಎದುರಾಗಬಹುದು.
ಏನಿದು ಕಿಸಾನ್ ಗುರುತಿನ ಚೀಟಿ?
ಕಿಸಾನ್ ಪೆಹಚಾನ್ ಪತ್ರ ಅಥವಾ ರೈತ ಗುರುತಿನ ಚೀಟಿ ಎಂದರೆ ಏನು? ಇದು ಏಕೆ ಮುಖ್ಯ? ಎಂಬ ಕೆಲ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ. ರೈತ ಗುರುತಿನ ಚೀಟಿ ಎನ್ನುವುದು ರಾಜ್ಯಗಳ ಭೂ ದಾಖಲೆಗಳೊಂದಿಗೆ ಲಿಂಕ್ ಆಗಿರುವ ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದೆ. ಇದರಲ್ಲಿ ಭೂ ರೈತನ ಹೆಸರು, ಭೂಮಿಯ ಮಾಹಿತಿ, ಆ ಭೂಮಿಯಲ್ಲಿ ಬೆಳೆಯಲಾಗುತ್ತಿರುವ ಬೆಳೆ ಮತ್ತಿತರ ವಿವರಗಳನ್ನು ಇರುತ್ತವೆ. ಅಲ್ಲದೇ ಈ ಐಡಿಗಳು ಸರ್ಕಾರಕ್ಕೆ ನೇರ ನಗದು ವರ್ಗಾವಣೆ, ಕೃಷಿ ಸಾಲ ಮಂಜೂರು, ಬೆಳೆ ವಿಮೆ ನೀಡಲು ಹೆಚ್ಚು ನಿಖರವಾಗಿ ಊಹಿಸಲು ಸುಲಭವಾಗಿಸುತ್ತದೆ.
KYC ಮಾಡಿಸುವುದು ಕಡ್ಡಾಯ:
ಇದರ ಜೊತೆಗೆ ಎಂದಿನಂತೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ಪಡೆಯಲು ರೈತರು KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು. ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಬೇಕು. ಫಲಾನುಭವಿಗಳು pmkisan.gov.in ಮೂಲಕ ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ನಮೂದಿಸಬೇಕು. ಬಳಿಕ ಡೇಟಾ ಬಟನ್ ಮೇಲೆ ಕ್ಲಿಕ್ ಮಾಡಿ. ಪರದೆಯ ಮೇಲೆ ನಿಮ್ಮ ಅರ್ಜಿಯ ಪ್ರತಿ ಕಾಣುತ್ತದೆ. ಈ ಮೂಲಕ ರೈತರು KYC ನೋಂದಣಿ ಮಾಡಿಕೊಳ್ಳಬೇಕು.