ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ-2.0 (PMAY-U 2.0) ಅಡಿಯಲ್ಲಿ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿಯಲ್ಲಿ ಈ ನಾಲ್ಕು ಮುಖ್ಯ ಉಪಯೋಜನೆಗಳ ಲಾಭ ಪಡೆಯಬಹುದು:
ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (BLC)
ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (AHP)
ಕೈಗೆಟಕುವ ಬಾಡಿಗೆ ವಸತಿ ಯೋಜನೆ (ARH)
ಬಡ್ಡಿ ಸಹಾಯಧನ ವಸತಿ ಯೋಜನೆ (ISS)
ಅರ್ಹತೆಗಳು
ಅರ್ಜಿದಾರರು ವಿವಾಹಿತ ಮಹಿಳೆಯರು ಅಥವಾ ಏಕ ಮಹಿಳಾ ಗೃಹಮಾಲೀಕರು ಆಗಿರಬೇಕು. ಪುರುಷ ಅಭ್ಯರ್ಥಿಗಳು ಅಂಗವಿಕಲರು, ಹಿರಿಯ ನಾಗರಿಕರು, ವಿಧುರರು, ವಿಚ್ಛೇದಿತರು ಅಥವಾ ಮಾಜಿ ಯೋಧರು ಆಗಿರಬೇಕು.
ವಾರ್ಷಿಕ ಕುಟುಂಬ ಆದಾಯ ₹2 ಲಕ್ಷದೊಳಗಿರಬೇಕು.
ಕಳೆದ 20 ವರ್ಷಗಳಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ವಸತಿ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಮನೆ ನಿರ್ಮಿಸಿರಬಾರದು.
ಅರ್ಜಿದಾರರು 01-09-2024ರೊಳಗೆ ಸಂಬಂಧಿತ ನಗರ/ಪಟ್ಟಣದಲ್ಲಿ ವಾಸವಿರಬೇಕು.
ತಮ್ಮ ಹೆಸರಿನಲ್ಲಿ ಅಥವಾ ಕುಟುಂಬದ ಹೆಸರಿನಲ್ಲಿ ಯಾವುದೇ ಸ್ವಂತ ಪಕ್ಕಾ ಮನೆ ಅಥವಾ ನಿವೇಶನ ಹೊಂದಿರಬಾರದು (ನಿವೇಶನ ರಹಿತರು/ಕಚ್ಚಾ ಮನೆ ಇದ್ದವರು ಮಾತ್ರ ಅರ್ಹರು).
ಸ್ವಂತ ನಿವೇಶನ ಹೊಂದಿದ್ದಲ್ಲಿ ಕ್ರಮಬದ್ಧ ದಾಖಲೆಗಳು (ಹಕ್ಕುಪತ್ರ, ಕ್ರಯಪತ್ರ, ದಾನಪತ್ರ, ಉಡುಗೊರೆ ಪತ್ರ ಅಥವಾ ಖಾತಾ ಪತ್ರ) ಹೊಂದಿರಬೇಕು.
31-12-2023ರ ನಂತರ ಮನೆ ಮಂಜೂರಾಗಿ ನಂತರ ರದ್ದಾದ ಫಲಾನುಭವಿಗಳು ಅರ್ಹರಾಗಿಲ್ಲ.
ಅರ್ಜಿಗೆ ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್ (ಅರ್ಜಿ ಮಾಡುತ್ತಿರುವ ವ್ಯಕ್ತಿ ಹಾಗೂ ಕುಟುಂಬ ಸದಸ್ಯರದು)
ನಿವೇಶನದ ದಾಖಲೆಗಳು (ಅರ್ಹರಿದ್ದಲ್ಲಿ)
ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ
ಪಡಿತರ ಚೀಟಿ
ಬ್ಯಾಂಕ್ ಖಾತೆ ವಿವರ
Annexure-2A/2B/2C ಫಾರ್ಮ್‌ನಲ್ಲಿ ಸ್ವಘೋಷಣೆ ಪತ್ರ (Self Undertaking)
ಮೊಬೈಲ್ ನಂಬರ್
ಪ್ಯಾನ್ ಕಾರ್ಡ್ (ಇದ್ದಲ್ಲಿ
ಅರ್ಜಿಸಲ್ಲಿಕೆ ಅಂತಿಮ ದಿನಾಂಕ:15-07-2025
ಅರ್ಜಿಸಲ್ಲಿಸಲು ವೆಬ್‌ಸೈಟ್:🔗 https://pmay-urban.gov.in