Job alert : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ನಿಂದ ಉದ್ಯೋಗಾವಕಾಶ- ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲಾ ಮ್ಯಾನೇಜರ್, ​ತಾಲೂಕು ಪ್ರೊಗ್ರಾಂ ಮ್ಯಾನೇಜರ್​​, ಬ್ಲಾಕ್​ ಮ್ಯಾನೇಜರ್​ ಸೇರಿದಂತೆ ನಾನಾ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಈ ಹುದ್ದೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 30 ಆಗಿದೆ.ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆ ವಿವರ: ಒಟ್ಟು 13 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದ್ದು, ಜಿಲ್ಲಾ ಮ್ಯಾನೇಜರ್​, ತಾಲೂಕು ಪ್ರೊಗ್ರಾಂ ಮ್ಯಾನೇಜರ್​​, ಬ್ಲಾಕ್​ ಮ್ಯಾನೇಜರ್​, ಕ್ಲಸ್ಟರ್​ ಸೂಪರ್​ವೈಸರ್​- ಸ್ಕಿಲ್​, ಕ್ಲಸ್ಟರ್​ ಸೂಪರ್​​ವೈಸರ್​, ತಾಲೂಕ್​ ಪ್ರೋಗ್ರಾಂ ಮ್ಯಾನೇಜರ್​ – ಎಸ್​ವಿಇಪಿ, ಆಫೀಸ್​ ಅಸಿಸ್ಟಂಟ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಿದೆ.

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ಎಂಬಿಎ, ಎಂಎಸ್​ಡಬ್ಲ್ಯೂ, ಸ್ನಾತಕೋತ್ತರ ಪದವಿ, ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.ಅರ್ಜಿ ಸಲ್ಲಿಕೆ: ಕರ್ನಾಟಕ ಸರ್ಕಾರದ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಧಿಕೃತ ಜಾಲತಾಣದ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ

ಈ ಹುದ್ದೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಮೇ 30 ಆಗಿದೆ.ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ksrlps.karnataka.gov.in ಭೇಟಿ ನೀಡಬಹುದಾಗಿದೆ.

sreelakshmisai
Author

sreelakshmisai

Leave a Reply

Your email address will not be published. Required fields are marked *