ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಲೀಗ್ ಹಂತದ ಪಂದ್ಯಗಳು ಯಶಸ್ವಿಯಾಗಿ ಸಂಪನ್ನವಾಗಿವೆ. 10 ತಂಡಗಳ ಪೈಕಿ ಅತ್ಯಧಿಕ ಗೆಲುವುಗಳೊಂದಿಗೆ ಟಾಪ್ 4 ಸ್ಥಾನ ಗಳಿಸಿದ ತಂಡಗಳು ಪ್ಲೇಆಫ್ ಹಂತಕ್ಕೇರಿವೆ. ಈ ತಂಡಗಳು – ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಪಂಜಾಬ್ ಕಿಂಗ್ಸ್ (PBKS), ಗುಜರಾತ್ ಟೈಟಾನ್ಸ್ (GT) ಮತ್ತು ಮುಂಬೈ ಇಂಡಿಯನ್ಸ್ (MI) ಮುಂದಿನ ಹಂತದಲ್ಲಿ ಕಣಕ್ಕಿಳಿಯಲಿವೆ.
ಪ್ಲೇಆಫ್ ಹಂತದ ವೇಳಾಪಟ್ಟಿ ಹೀಗಿದೆ:
ಮೊದಲ ಕ್ವಾಲಿಫೈಯರ್ – ಮೇ 29:ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಚಂಢೀಗಢ್‌ನ ಮುಲ್ಲನ್‌ಪುರ್ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ನಡೆಯಲಿದೆ. ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸುತ್ತಿದ್ದು, ಸೋತ ತಂಡ ಇನ್ನೊಂದು ಅವಕಾಶ ಪಡೆಯಲಿದೆ.
ಎಲಿಮಿನೇಟರ್ – ಮೇ 30:ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಈ ಪಂದ್ಯ ನಡೆಯಲಿದೆ. ಈ ಪಂದ್ಯವೂ ಮುಲ್ಲನ್‌ಪುರ್‌ನಲ್ಲಿ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಸೋತ ತಂಡ ಟೂರ್ನಿಯಿಂದ ಹೊರಹೋಗಲಿದೆ, ಆದರೆ ಗೆದ್ದ ತಂಡದಿಗೆ ಇನ್ನೊಂದು ಪಂದ್ಯವಾಡಲು ಅವಕಾಶ ಸಿಗಲಿದೆ.
ದ್ವಿತೀಯ ಕ್ವಾಲಿಫೈಯರ್ – ಜೂನ್ 1:ಎಲಿಮಿನೇಟರ್ ಗೆದ್ದ ತಂಡ ಮತ್ತು ಮೊದಲ ಕ್ವಾಲಿಫೈಯರ್ ಸೋತ ತಂಡ ನಡುವೆ ಅಹಮದಾಬಾದ್‌ನ ಪಂದ್ಯ ನಡೆಯಲಿದೆ.
ಫೈನಲ್ – ಜೂನ್ 3:ಐಪಿಎಲ್ ಸೀಸನ್-18ರ ಗ್ರಾಂಡ್ ಫಿನಾಲೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಇದರೊಂದಿಗೆ ಈ ಆಕರ್ಷಕ ಟೂರ್ನಿಗೆ ತೆರೆ ಬೀಳಲಿದೆ.