ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಇಂದು ಶುಕ್ರವಾರ ಹಳದಿ ಲೋಹದ ಬೆಲೆ ಗ್ರಾಮ್ಗೆ 70 ರೂ ಹೆಚ್ಚಾಗಿದೆ. ಆಭರಣ ಚಿನ್ನದ ಬೆಲೆ (gold rate) 9,500 ರೂ ಸಮೀಪಕ್ಕೆ ದೌಡಾಯಿಸುತ್ತಿದೆ. ಅಪರಂಜಿ ಚಿನ್ನದ ಬೆಲೆ 10,300 ರೂ ಗಡಿ ದಾಟಿ ಮುಂದೆ ಹೋಗಿದೆ.
18 ಕ್ಯಾರಟ್ ಚಿನ್ನದ ಬೆಲೆಯೂ 7,750 ರೂ ಗಡಿಗೆ ಬಂದಿದೆ. ವಿದೇಶಗಳಲ್ಲೂ ಇವತ್ತು ಬೆಲೆ ಹೆಚ್ಚಳ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಏರಿಕೆ ಕಂಡು ಬಂದಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 94,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,03,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 94,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,700 ರುಪಾಯಿಯಲ್ಲಿ ಇದೆ.
ಇಂದಿನ ದಿನದ ಚಿನ್ನದ ದರದಲ್ಲಿ ಏರಿಕೆ- ಇಳಿಕೆ ಕಂಡುಬಂದಿದೆ. 9 ಆಗಸ್ಟ್ 2025 ರಂದು 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ ಹೀಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 94,700 ರೂಚೆನ್ನೈ: 94,700 ರೂಮುಂಬೈ: 94,700 ರೂದೆಹಲಿ: 94,850 ರೂಕೋಲ್ಕತಾ: 94,700 ರೂಕೇರಳ: 94,700 ರೂಅಹ್ಮದಾಬಾದ್: 94,750 ರೂಜೈಪುರ್: 94,850 ರೂಲಕ್ನೋ: 94,850 ರೂಭುವನೇಶ್ವರ್: 94,700 ರೂ
ಕಳೆದ ವಾರದಿಂದ ಚಿನ್ನದ ದರದಲ್ಲಿ ಸ್ಥಿರತೆ ಕಂಡುಬಂದಿದೆ, ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು ಮುಂದಿನ ದಿನಗಳಲ್ಲಿ ದರವನ್ನು ಪ್ರಭಾವಿತಗೊಳಿಸಬಹುದು.