ಭಾರತ ಸರ್ಕಾರವು ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಒತ್ತೆ ನೀಡುವ ಪ್ರಯತ್ನವಾಗಿ ಆಯುಷ್ಮಾನ್ ವಯೋ ವಂದನಾ ಯೋಜನೆ (AVVY) ಅನ್ನು ಅಕ್ಟೋಬರ್ 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದಾರೆ. ಈ ಯೋಜನೆ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಯ ವಿಸ್ತರಣೆ ಆಗಿದ್ದು, 70 ವರ್ಷ ಮತ್ತು ಹೆಚ್ಚು ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ವಾರ್ಷಿಕ ₹5 ಲಕ್ಷ ನಗದುರಹಿತ ಆರೋಗ್ಯ ವಿಮೆ ಕವರೇಜ್ ಒದಗಿಸುತ್ತದೆ.
ಹಿರಿಯ ನಾಗರಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು, ಅವರ ಮೇಲೆ ಇರುವ ಆರ್ಥಿಕ ಭಾರವನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ. “ವಯಸ್ಸು ಗುಣಮಟ್ಟದ ಆರೋಗ್ಯ ಸೇವೆಗೆ ಅಡ್ಡಿಯಾಗಬಾರದು ಎಂಬ ದೃಷ್ಟಿಕೋಣದಿಂದ ಇದು ಮಾನವೀಯ ಹಾಗೂ ಸಮಗ್ರ ಹೆಜ್ಜೆ” ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯೋಜನೆಯ ಪ್ರಮುಖ ಅಂಶಗಳು:
70 ವರ್ಷ ಮತ್ತು ಅಧಿಕ ವಯಸ್ಸಿನ ನಾಗರಿಕರಿಗೆ ಸ್ವಯಂಚಾಲಿತ ಅರ್ಹತೆ.
PM-JAY ಯೋಜನೆಗೆ ಈಗಾಗಲೇ ನೋಂದಾಯಿಸಿರುವವರು ಹೆಚ್ಚುವರಿ ₹5 ಲಕ್ಷ ಟಾಪ್-ಅಪ್ ಪಡೆಯುತ್ತಾರೆ.
ಇತರ ವಿಮೆ ಯೋಜನೆಗಳು ಇದ್ದರೂ, ವ್ಯಕ್ತಿಗೆ ಆಯ್ಕೆ ಮಾಡಲು ಅವಕಾಶ.
ಮೊದಲ ದಿನದಿಂದಲೇ ಯೋಜನೆಯ ಫಲಾನುಭವಿಗಳು ಕವರೇಜ್ ಪಡೆಯಬಹುದು.
ಯಾವ ಚಿಕಿತ್ಸೆಗಳನ್ನು ಒಳಗೊಂಡಿದೆ?
AVVY ಯೋಜನೆ 27 ವೈದ್ಯಕೀಯ ವಿಭಾಗಗಳಲ್ಲಿ 1,961 ಕ್ಕೂ ಹೆಚ್ಚು ಚಿಕಿತ್ಸೆ ವಿಧಾನಗಳನ್ನು ಒಳಗೊಂಡಿದ್ದು, ಹಿಮೋಡಯಾಲಿಸಿಸ್, ಪೇಸ್‌ಮೇಕರ್ ಇಂಪ್ಲಾಂಟ್, ಮೊಣಕಾಲು ಹಾಗೂ ಸೊಂಟ ಬದಲಾವಣೆ, ಆಂಜಿಯೋಗ್ರಾಮ್‌ನೊಂದಿಗೆ PTCA ಮುಂತಾದವು ಸೇರಿವೆ.
AVVY ಯೋಜನೆ 27 ವೈದ್ಯಕೀಯ ವಿಭಾಗಗಳಲ್ಲಿ 1,961 ಕ್ಕೂ ಹೆಚ್ಚು ಚಿಕಿತ್ಸೆ ವಿಧಾನಗಳನ್ನು ಒಳಗೊಂಡಿದ್ದು, ಹಿಮೋಡಯಾಲಿಸಿಸ್, ಪೇಸ್‌ಮೇಕರ್ ಇಂಪ್ಲಾಂಟ್, ಮೊಣಕಾಲು ಹಾಗೂ ಸೊಂಟ ಬದಲಾವಣೆ, ಆಂಜಿಯೋಗ್ರಾಮ್‌ನೊಂದಿಗೆ PTCA ಮುಂತಾದವು ಸೇರಿವೆ.
ಆಯುಷ್ಮಾನ್ ವಯೋ ವಂದನಾ ಕಾರ್ಡ್ ಹೇಗೆ ಪಡೆಯುವುದು?
ಗೂಗಲ್ ಪ್ಲೇ ಸ್ಟೋರ್‌ನಿಂದ ಆಯುಷ್ಮಾನ್ ಭಾರತ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಫಲಾನುಭವಿ ಅಥವಾ ಆಪರೇಟರ್ ಲಾಗಿನ್ ಆಯ್ಕೆ ಮಾಡಿ.
ಮೊಬೈಲ್ ಸಂಖ್ಯೆ ಹಾಗೂ OTP ಮೂಲಕ ಲಾಗಿನ್ ಮಾಡಿ.
ರಾಜ್ಯ ಹಾಗೂ ಆಧಾರ್ ವಿವರ ನಮೂದಿಸಿ.
OTP ಆಧಾರಿತ e-KYC ಮುಗಿಸಿ.
ಇತರ ವಿವರಗಳನ್ನು ಪೂರೈಸಿ ನೋಂದಣಿ ಮುಗಿಸಿ.
ನೋಂದಣಿಯ ನಂತರ AVVY ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಈ ಕಾರ್ಡ್ ಬಳಸಿದವರು ದೇಶಾದ್ಯಂತ 30,000ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ, ಖಾಸಗಿ ಹಾಗೂ ಸರ್ಕಾರಿ ಸೇವೆಗಳೊಂದಿಗೆ ನಗದುರಹಿತ ಚಿಕಿತ್ಸೆ ಪಡೆಯಬಹುದು. ಈಗಾಗಲೇ ₹1.29 ಲಕ್ಷ ಕೋಟಿ ಮೌಲ್ಯದ ಉಚಿತ ಚಿಕಿತ್ಸೆ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನೀಡಲಾಗಿದೆ. ವಯೋ ವಂದನಾ ಯೋಜನೆಯ ಸಹಾಯದಿಂದ ಹಿರಿಯ ನಾಗರಿಕರ ಆರೋಗ್ಯ ಸೇವೆಗಳ ವ್ಯಾಪ್ತಿ ಮತ್ತು ತೃಪ್ತಿಯಲ್ಲಿ ಮತ್ತಷ್ಟು ಬೆಳವಣಿಗೆ ನಿರೀಕ್ಷೆಯಿದೆ.