7 ವರ್ಷಗಳ ಹಿಂದೆ ಆರಂಭವಾದ ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆ (AB-JAY) ಇಂದು ಸಾವಿರಾರು ನಿರ್ಗತಿಕರು, ವಿಶೇಷ ಚೇತನರು ಹಾಗೂ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಹಾಯಕರಾಗುತ್ತಿದೆ. ಇದೀಗ ಈ ಯೋಜನೆಯ ವ್ಯಾಪ್ತಿ ವಿಸ್ತರಿಸಿ, ಇನ್ನಷ್ಟು ಜನರಿಗೆ ಅನುಕೂಲವಾಗುವಂತೆ ಮಾಡಲಾಗಿದೆ.
ಹಿರಿಯರಿಗೆ ವಿಶೇಷ ಕಾರ್ಡ್: ಆಯುಷ್ಮಾನ್ ವಯ ವಂದನ
ಈ ಯೋಜನೆಯಡಿ, ಹಿರಿಯರು ಆಯುಷ್ಮಾನ್ ವಯ ವಂದನ ಕಾರ್ಡ್ ಅಥವಾ ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಬಹುದಾಗಿದೆ. ಇದು ವರ್ಷಕ್ಕೆ ₹5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ (Health Insurance Coverage) ಒದಗಿಸುತ್ತದೆ. ಇದರಿಗಾಗಿ ಆಧಾರ್ ಕಾರ್ಡ್ ದಾಖಲೆ ಸಾಕು – ಬೇರೆ ಯಾವುದೇ ಕಾಗದಪತ್ರಗಳ ಅಗತ್ಯವಿಲ್ಲ.
ಸಾವಿರಾರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ
ದೇಶದಾದ್ಯಂತ ಸಾವಿರಾರು ಎನ್ಲಿಸ್ಟ್ ಆಗಿರುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾರ್ಡ್ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದು. ಕಾರ್ಡ್ ಪಡೆಯಲು ayushmanbharat.gov.in ವೆಬ್ಸೈಟ್ನಲ್ಲಿ ನೋಂದಣಿ ಮಾಡಿದರೆ ಸಾಕು.
ಆಭಾ ಐಡಿ ಇದ್ದರೆ ಇನ್ನೂ ಅನುಕೂಲ
ಆಭಾ (ABHA – Ayushman Bharat Health Account) ಒಂದು ಡಿಜಿಟಲ್ ಹೆಲ್ತ್ ಐಡಿ. ಬ್ಯಾಂಕ್ನ ಪ್ಯಾನ್ ಕಾರ್ಡ್ ಹೇಗೆ ಹಣಕಾಸು ವ್ಯವಹಾರಗಳಿಗೆ ಸಹಾಯ ಮಾಡುತ್ತದೋ, ಅದೇ ರೀತಿ ಆಭಾ ಐಡಿ ನಿಮ್ಮ ಎಲ್ಲ ವೈದ್ಯಕೀಯ ದಾಖಲೆಗಳನ್ನು ಒಂದೇ ಕಡೆ ಸಂಗ್ರಹಿಸುತ್ತದೆ.
ಆಸ್ಪತ್ರೆಗೆ ಹೋಗುವಾಗ ಆಯುಷ್ಮಾನ್ ಕಾರ್ಡ್ ಜೊತೆಗೆ ಆಭಾ ಐಡಿಯನ್ನು ನೀಡುವುದರಿಂದ ವೈದ್ಯರು ನಿಮ್ಮ ಮೆಡಿಕಲ್ ಹಿಸ್ಟರಿ ತಿಳಿದು ಸುಲಭವಾಗಿ ಚಿಕಿತ್ಸೆ ನೀಡಬಹುದು. ಇನ್ನುಬೇರೆ ಚಿಕಿತ್ಸೆ ಪಡೆಯುವಾಗ ಅಥವಾ ಇನ್ಷೂರೆನ್ಸ್ ಕ್ಲೇಮ್ ಸೆಟಲ್ ಮಾಡುವಾಗ ಇದರಿಂದ ಹೆಚ್ಚಿನ ಸಹಾಯ ಸಿಗುತ್ತದೆ.
ಆಭಾ ಐಡಿ ಪಡೆಯುವುದು ಹೇಗೆ?
ಈ ವೆಬ್ಸೈಟ್ಗೆ ಹೋಗಿ: abha.abdm.gov.in“Create ABHA Number” ಕ್ಲಿಕ್ ಮಾಡಿನಿಮ್ಮ ಆಧಾರ್ ನಂಬರ್ ಮತ್ತು ಇತರ ವಿವರಗಳನ್ನು ನಮೂದಿಸಿನಿಮ್ಮ 14 ಅಂಕಿಯ ಆಭಾ ನಂಬರ್ ತಕ್ಷಣ ಲಭ್ಯವಾಗುತ್ತದೆ.