bhu suraksha yojana : ಭೂ ಸುರಕ್ಷಾ ಯೋಜನೆಯ ಮುಖ್ಯ ಉದ್ದೇಶಗಳು

ಇದೀಗ ಕರ್ನಾಟಕ ಸರ್ಕಾರ “ಭೂ ಸುರಕ್ಷಾ ಯೋಜನೆ” ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದ ರೈತರು ಹಾಗೂ ಜಮೀನು ಮಾಲೀಕರ ಭೂಸಂಬಂಧಿತ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವ ನಿಟ್ಟಿನಲ್ಲಿ ಹೆಜ್ಜೆಹಾಕಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಸ್ವಾತಂತ್ರ್ಯಪೂರ್ವ ಹಾಗೂ ನಂತರದ ಎಲ್ಲಾ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಡಿಜಿಟಲ್ ಫಾರ್ಮ್ಯಾಟ್‌ನಲ್ಲಿ ಶೇಖರಿಸುವುದು.

ಈ ಯೋಜನೆಯ ಮೂಲಕ:

ಹಳೆಯ ದಾಖಲೆಗಳ ನಷ್ಟ ಅಥವಾ ಕೃತಕ ಬದಲಾವಣೆಗಳು ನಡೆಯದಂತೆ ತಡೆಯಬಹುದು.

ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಲು ನೆರವಾಗುತ್ತದೆ.

ನಕಲಿ ದಾಖಲೆ ಸೃಷ್ಟಿಗೆ ಕಡಿವಾಣ ಬೀಳುತ್ತದೆ.

ನಾಗರಿಕರಿಗೆ ಆನ್‌ಲೈನ್‌ನಲ್ಲಿ ಸುಲಭವಾಗಿ ದಾಖಲೆ ಲಭ್ಯವಾಗುವಂತೆ ಮಾಡುತ್ತದೆ.

ಯೋಜನೆಯ ಪ್ರಕ್ರಿಯೆ:ತಾಲೂಕು ಕಚೇರಿಗಳ ಅಭಿಲೇಖಾಲಯಗಳಲ್ಲಿ ಇರುವ ಹಳೆಯ ಹಾಗೂ ಇತಿಹಾಸಪೂರ್ಣ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್‌ಲೋಡ್ ಮಾಡುವ ಮೂಲಕ ಗಣಕೀಕರಣಗೊಳಿಸಲಾಗುತ್ತಿದೆ. ಇದರಿಂದ ನಾಗರಿಕರು ಕಚೇರಿಗಳಿಗೆ ತೆರಳದೆ ತಾವು ಬೇಕಾದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ.

ಈ ಯೋಜನೆಯು 2024ರ ಫೆಬ್ರವರಿಯಿಂದ ಪ್ರಾಯೋಗಿಕವಾಗಿ ಪ್ರಾರಂಭವಾಗಿದ್ದು, ಪ್ರತಿ ಜಿಲ್ಲೆಯಲ್ಲಿ ಒಂದು ತಾಲ್ಲೂಕಿನಲ್ಲಿ ಜಾರಿಗೆ ತರಲಾಗಿದೆ. ಭವಿಷ್ಯದಲ್ಲಿ ಇದನ್ನು ಎಲ್ಲ ತಾಲ್ಲೂಕುಗಳಿಗೆ ವಿಸ್ತರಿಸುವ ಉದ್ದೇಶವಿದೆ.

ಭೂ ಸುರಕ್ಷಾ ಯೋಜನೆಯ ಮುಖ್ಯ ಉದ್ದೇಶಗಳು:

ಹಳೆಯ ಭೂ ದಾಖಲೆಗಳ ನಾಶ ಅಥವಾ ಅಕ್ರಮ ಬದಲಾವಣೆ ತಡೆಯುವುದು

ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು

ಭೂ ದಾಖಲೆಗಳ ಪಾರದರ್ಶಕತೆ ಮತ್ತು ಲಭ್ಯತೆ ಹೆಚ್ಚಿಸುವುದು

ಆನ್‌ಲೈನ್ ಮೂಲಕ ಪ್ರಮಾಣಿತ ನಕಲುಗಳ ವೀಕ್ಷಣೆ ಹಾಗೂ ಡೌನ್‌ಲೋಡ್‌ಗೆ ಅವಕಾಶ

ಕಡತ ನಿರ್ವಹಣೆಗೆ ಬೇಕಾಗುವ ಶ್ರಮ ಮತ್ತು ಸಮಯವನ್ನು ಕಡಿಮೆ ಮಾಡುವುದು

ಕೀವರ್ಡ್‌ಗಳ ಆಧಾರದ ಮೇಲೆ ವೇಗವಾಗಿ ದಾಖಲೆ ಹುಡುಕುವ ವ್ಯವಸ್ಥೆ ಕಲ್ಪಿಸುವುದು

sreelakshmisai
Author

sreelakshmisai

Leave a Reply

Your email address will not be published. Required fields are marked *