13 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು: ಗಣತಿ ವೇಗಕ್ಕೆ ತಡೆ : ಸಮಸ್ಯೆ ಏನು?

ರಾಜ್ಯದಲ್ಲಿ ಅನರ್ಹ ಬಿಪಿಎಲ್‌ (ಆದ್ಯತಾ ಪಡಿತರ ಕುಟುಂಬ) ಕಾರ್ಡ್‌ ಗಳ ವಿರುದ್ಧ ಸರಕಾರ ಕೈಗೊಂಡ ಕಾರ್ಯಾಚರಣೆ ಸ್ವತಃ ಸರಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಮೇಲೆಯೇ ಪರಿಣಾಮ ಬೀರುತ್ತಿದೆ!

ರಾಜ್ಯಾದ್ಯಂತ ಗಣತಿದಾರರು ಪಡಿತರಚೀಟಿ ಸಂಖ್ಯೆಯೊಂದಿಗೆ ಕುಟುಂಬಗಳ ಮಾಹಿತಿ ಸಂಗ್ರಹಿ ಸಲು ಹೊರಟಿದ್ದಾರೆ.

ಆದರೆ ಅನೇಕ ಕಡೆ ಆ ಪಡಿತರ ಚೀಟಿಯೇ ರದ್ದಾಗಿದೆ. ಆ ಮೂಲಕ ಸಮೀಕ್ಷೆಯ ಆಮೆವೇಗಕ್ಕೆ ಸರಕಾರದ “ಆಪರೇಷನ್‌ ಅನರ್ಹ ಬಿಪಿಎಲ್‌’ ಕಾರ್ಯಾಚರಣೆಯೂ ಪರೋಕ್ಷವಾಗಿ ಕೊಡುಗೆ ನೀಡುತ್ತಿದೆ.2 ವಾರಗಳಿಂದ ರಾಜ್ಯದಲ್ಲಿ ಅನರ್ಹ ಬಿಪಿಎಲ್‌ ಕಾರ್ಡ್‌ ವಿರುದ್ಧ ಸರಕಾರ ಕಾರ್ಯಾಚರಣೆ ನಡೆಸುತ್ತಿದೆ. ಅನರ್ಹ ಬಿಪಿಎಲ್‌ ಕಾರ್ಡ್‌ದಾರ ರನ್ನು ಕೇವಲ ಎಪಿಎಲ್‌ಗೆ ಮಾರ್ಪಾಡು ಮಾಡಲಾ ಗುತ್ತಿದೆ ಎಂದು ಹೇಳುತ್ತಲೇ ಸರಕಾರ ತೆರೆಮೆರೆಯಲ್ಲಿ ರದ್ದುಗೊಳಿಸುತ್ತಿದೆ. ಆದರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಗೆ ಕಡ್ಡಾಯಗೊಳಿಸಿದ ಎರಡು ಆಯ್ಕೆಗಳ ಪೈಕಿ ಈ ಪಡಿತರಚೀಟಿ ಕೂಡ ಒಂದಾಗಿದೆ. ಸಮೀಕ್ಷೆಗೆ ಭೇಟಿ ನೀಡಿದಾಗ ಹಲವೆಡೆ ಆ ಪಡಿತರ ಚೀಟಿ ಸಂಖ್ಯೆಯನ್ನು ದಾಖಲಿಸಿದಾಗ, ಕುಟುಂಬದ ದತ್ತಾಂಶವೇ ಬರುತ್ತಿಲ್ಲ. ಇದರಿಂದ ಸಮೀಕ್ಷೆಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಕೆಲವು ಗಣತಿದಾರರು ಹೇಳುತ್ತಿದ್ದಾರೆ.

ಕಾರ್ಡ್‌ ರದ್ದತಿಯಿಂದ ಸಮೀಕ್ಷೆ ವಿಳಂಬಈಗಾಗಲೇ ತಾಂತ್ರಿಕ ಕಾರಣಗಳಿಂದ ಸಮೀಕ್ಷೆ ಕುಂಟುತ್ತಾ ಸಾಗುತ್ತಿದೆ. ಈ ಮಧ್ಯೆ ಬಿಪಿಎಲ್‌ ಕಾರ್ಡ್‌ ರದ್ದತಿಯಿಂದ ಅವುಗಳ ಆಧಾರ ದಲ್ಲಿ ದತ್ತಾಂಶ ಸಂಗ್ರಹಿಸುವ ಆಯ್ಕೆಯೂ ಕೆಲವೆಡೆ ಇಲ್ಲವಾಗುತ್ತಿದೆ. ಪರಿಣಾಮ ಮತ್ತಷ್ಟು ಮಂದಗತಿ ಯಲ್ಲಿ ಸಾಗಲು ಇದು ಕಾರಣವಾಗುತ್ತಿದೆ ಎಂದು ಹೆಸರು ಗಣತಿದಾರರೊಬ್ಬರು ತಿಳಿಸಿದರು.ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ ಮೂಲಗಳ ಪ್ರಕಾರ ಮುಖ್ಯವಾಗಿ ಬೇರೆ ರಾಜ್ಯಗಳಲ್ಲಿ ಪಡಿತರಚೀಟಿ ಹೊಂದಿರುವವರೇ 70-72 ಸಾವಿರ ಕುಟುಂಬಗಳಿವೆ. ಅದೇ ರೀತಿ, ಮೃತಪಟ್ಟಿದ್ದರೂ ಪಡಿತರ ಪಡೆಯುತ್ತಿರುವ ಕುಟುಂಬಗಳೂ ಸಾವಿರಾರು ಇವೆ. ಅವುಗಳನ್ನು ಖಾತ್ರಿಪಡಿಸಿಕೊಂಡು ನೇರವಾಗಿ ರದ್ದುಗೊಳಿಸಲಾಗುತ್ತಿದೆ. ಕೆಲವೆಡೆ ಕುಟುಂಬಗಳ ಯೂನಿಟ್‌ಗಳೂ ರದ್ದಾಗಿವೆ. ಅಂತಹ ಕುಟುಂಬಗಳ ದತ್ತಾಂಶ ಸಂಗ್ರಹ ಆಧಾರ್‌ ಸಂಖ್ಯೆ ದಾಖಲಿಸಿಕೊಂಡೇ ಮುಂದುವರಿಯಬೇಕಿದೆ.”ನಾವು ಯಾವುದೇ ಕಾರ್ಡ್‌ಗಳನ್ನು ರದ್ದುಗೊಳಿಸುತ್ತಿಲ್ಲ. ಬಿಪಿಎಲ್‌ಗೆ ಅನರ್ಹರಾ ದವರನ್ನು ಗುರುತಿಸಿ, ಎಪಿಎಲ್‌ಗೆ ವರ್ಗಾವಣೆ ಮಾಡಲಾಗುತ್ತಿದೆ ಅಷ್ಟೇ. ಹಾಗಾಗಿ ಎಂದಿನಂತೆ ಆ ಸಂಖ್ಯೆ ಮುಂದುವರಿಯುತ್ತದೆ. ಸಮೀಕ್ಷೆ ಮೇಲೂ ಇದು ಪರಿಣಾಮ ಬೀರುವುದಿಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸುತ್ತಾರೆ.ಸಮಸ್ಯೆ ಏನು?ಸಮೀಕ್ಷೆಗೆ ಒಳಪಡುವ ಕುಟುಂಬದ ಪಡಿತರ ಚೀಟಿ ಅಥವಾ ಆಧಾರ್‌ ಕಡ್ಡಾಯ. ಪಡಿತರ ಚೀಟಿ ಸಂಖ್ಯೆ ಹೊಂದಿದ್ದರೆ, ಆ ಸಂಖ್ಯೆಯನ್ನು ಸಮೀಕ್ಷಾ ಆಯಪ್‌ನಲ್ಲಿ ದಾಖಲಿಸುತ್ತಿದ್ದಂತೆ ಇಡೀ ಕುಟುಂಬದ ಸದಸ್ಯರ ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆ ಸಹಿತ ಮಾಹಿತಿ ಬರುತ್ತದೆ. ಇದರಿಂದ ನೇರವಾಗಿ 60 ಪ್ರಶ್ನೆಗಳಿಗೆ ಉತ್ತರ ಪಡೆಯ ಬಹುದು. ಆದರೆ ಅನರ್ಹತೆ ಹಿನ್ನೆಲೆಯಲ್ಲಿ ಸಾವಿರಾರು ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿವೆ. ಹಾಗಾಗಿ ಗಣತಿದಾರರು ಹೊಸದಾಗಿ ಯುಎಚ್‌ಐಡಿ ಸೃಷ್ಟಿಸಿಕೊಂಡು ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್‌ ಸಂಖ್ಯೆಯನ್ನು ದಾಖಲಿಸಿಕೊಂಡು ಮಾಹಿತಿ ಸಂಗ್ರಹಿಸಬೇಕಾಗಿದೆ. ಇದಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ.

sreelakshmisai
Author

sreelakshmisai

Leave a Reply

Your email address will not be published. Required fields are marked *